Current Date 25 Aug, 2026

ಇದೇ ಸೆ. 20ಕ್ಕೆ ಬಿಡುಗಡೆಯಾಗಲಿದೆ “ಲಂಗೋಟಿ ಮ್ಯಾನ್"

ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸಂಜೋತ ಭಂಡಾರಿ ನಿರ್ದೇಶನದ " ಲಂಗೋಟಿ ಮ್ಯಾನ್" ಚಿತ್ರದ ಟ್ರೇಲರ್ ಬಿಡುಗಡೆ, ಹಾಡಿನ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಚಿತ್ರ ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ. ಈ ವೇಳೆ ಚಿತ್ರತಂಡ “ಲಂಗೋಟಿ ಮ್ಯಾನ್ " ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.

 ನಿರ್ದೇಶಕಿ ಸಂಜೋತ ಭಂಡಾರಿ ಮಾತನಾಡಿ, 'ಲಂಗೋಟಿ ಮ್ಯಾನ್' ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ಇದ್ದೇಶ ಹೊಂದಿಲ್ಲ. ಸೆಪ್ಟೆಂಬರ್ 20 ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.